ಅಭಿಪ್ರಾಯ / ಸಲಹೆಗಳು

​​​ಕಾರ್ಯಗಳು

  1. ಆಂತರಿಕ ವಲಯಗಳಗಳೊಂದಿಗೆ/ಇಲಾಖೆಗಳೊಂದಿಗೆ ಸಮಾಲೋಚನೆ ಮತ್ತು ಸಲಹಾ ಕಾರ್ಯ ಸೇರಿದಂತೆ ರಾಜ್ಯಕ್ಕೆ ಥಿಂಕ್ ಟ್ಯಾಂಕ್ ಆಗಿ ಹಾಗೂ ಸಂಶೋಧನೆ ಮತ್ತು ನಾವೀನ್ಯತೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. 
  2. ಕರ್ನಾಟಕದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಅಳವಡಿಕೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವನ್ನು ಕೈಗೊಳ್ಳುತ್ತದೆ.
  3. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ನೀತಿ ಮತ್ತು ಸಲಹೆಗಳನ್ನು (ಆಹಾರ ಭದ್ರತೆ, ನೀರಿನ ಭದ್ರತೆ, ಆರೋಗ್ಯ ಮತ್ತು ಪೌಷ್ಟಿಕಾಂಶ ಭದ್ರತೆ, ದತ್ತಾಂಶ ಭದ್ರತೆ, ಸಾಮಾಜಿಕ ಭದ್ರತೆ, ಸೈಬರ್ ಭದ್ರತೆ, ಹವಾಮಾನ ಸ್ಥಿತಿಸ್ಥಾಪಕತ್ವ, ನಗರ ನಿರ್ವಹಣೆ, ಬಡತನ ನಿರ್ಮೂಲನೆ, ತಂತ್ರಜ್ಞಾನ, ನಾವೀನ್ಯತೆ, ತಳಮಟ್ಟದ ನಾವೀನ್ಯತೆ, ಪರಿಸರ ಸಂರಕ್ಷಣೆ ಇತ್ಯಾದಿ) ನೀಡುತ್ತದೆ.
  4. ಜಿಲ್ಲೆ/ತಾಲ್ಲೂಕು/ಗ್ರಾಮ ಪಂಚಾಯತಿಗಳ ನಡುವೆ ಸ್ಪರ್ಧಾತ್ಮಕ ಮತ್ತು ಸಹಕಾರಿ ಬೆಳವಣಿಗೆಯನ್ನು ಉತ್ತೇಜಿಸುವುದು.
  5. ರಾಜ್ಯಕ್ಕೆ SDG ಆಯ-ವ್ಯಯ/SDG ಹಣಕಾಸು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದು.
  6. ಜಿಲ್ಲೆಯ ಆಯ-ವ್ಯಯ ಮತ್ತು ಜಿಲ್ಲಾ ಯೋಜನಾ ವಿಭಾಗಕ್ಕೆ (DPD) ಯೋಜನೆ ಸೇರಿದಂತೆ ರಾಜ್ಯದ ಅಭಿವೃದ್ಧಿ ಗುರಿಗಳನ್ನು ಪೂರೈಸಲು ಆಯ-ವ್ಯಯ ರಚನೆ ಪ್ರಕ್ರಿಯೆಗಳ ಸಮಯದಲ್ಲಿ ಒಳಹರಿವು (Inputs) ಗಳನ್ನು ಒದಗಿಸುವುದು.
  7. ರಾಜ್ಯದ ಅಭಿವೃದ್ಧಿಯನ್ನು ಹೆಚ್ಚಿಸಲು ಕರ್ನಾಟಕದ ಆರ್ಥಿಕ ಸಮೀಕ್ಷೆ, ಮಾನವ ಅಭಿವೃದ್ಧಿ ವರದಿ ಮತ್ತು ಇತರೇ ವರದಿಗಳಂತಹ ಪ್ರಕಟಣೆಗಳನ್ನು ಪ್ರಾರಂಭಿಸುವುದು, ಬೆಂಬಲಿಸುವುದು ಮತ್ತು ವಿತರಿಸುವುದು.
  8. ವಿವಿಧ ಯೋಜನೆಗಳು/ ಉಪಕ್ರಮಗಳು/ ಕಾರ್ಯಕ್ರಮಗಳು ಇತ್ಯಾದಿಗಳನ್ನು ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡುವುದು.
  9. ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸಲು ಸರ್ಕಾರಕ್ಕೆ ನೀತಿ ಮಾರ್ಗದರ್ಶನವನ್ನು ಒದಗಿಸುವುದು.
  10. ವಿವೇಚನಾ ನೀತಿ-ಸಂಬಂಧಿತ ನಿರ್ಧಾರ ಕೈಗೊಳ್ಳುವುದು ಮತ್ತು ಇತರೇ ಮಧ್ಯಸ್ಥಿಕೆಗಳಿಗೆ ಸಂಶೋಧನೆ ಆಧಾರಿತ ಸಮಗ್ರ ಯೋಜನೆಯನ್ನು ಒದಗಿಸುವುದು.
  11. ವರ್ಧಿತ ನಾಗರೀಕ ಕೇಂದ್ರಿತ ವಿತರಣಾ ವ್ಯವಸ್ಥೆಗಾಗಿ ಜ್ಞಾನ ಕ್ರೋಢೀಕರಣ ಮತ್ತು ಪಾಲುದಾರಿಕೆಗಳನ್ನು ಒದಗಿಸುವುದು ಮತ್ತು ಬೆಂಬಲಿಸುವುದು.
  12. ಶಿಕ್ಷಣ ಸಂಸ್ಥೆಗಳು, ನಾಗರಿಕ ಸಮಾಜ ಮತ್ತು ಇತರ ಖಾಸಗಿ ಸಂಸ್ಥೆಗಳ ಸಹಭಾಗಿತ್ವದ ಮುಖಾಂತರ ಕಾರ್ಯಾಗಾರಗಳು, ಸಮ್ಮೇಳನಗಳು, ಸೆಮಿನಾರ್‌ಗಳು ಇತ್ಯಾದಿಗಳ ಮೂಲಕ ನೀತಿ ಮಧ್ಯಸ್ಥಿಕೆಗಳು, ಜ್ಞಾನ ನಿರ್ವಹಣೆ ಮತ್ತು ಹಂಚಿಕೆ, ತಂತ್ರಜ್ಞಾನ ಪರಿವರ್ತನೆ, ನಾವೀನ್ಯತೆ ಮತ್ತು ತಳಮಟ್ಟದ ನಾವೀನ್ಯತೆ ಮತ್ತು ಸಂಪನ್ಮೂಲ ಕ್ರೋಢೀಕರಣದ ಮೂಲಕ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಧ್ಯಸ್ಥಗಾರರ ಸಹಭಾಗಿತ್ವ ಒದಗಿಸುವುದು.
  13. ಕೃಷಿ, ಉತ್ಪಾದನೆ, ಗಿಗ್ ಆರ್ಥಿಕತೆ ಮುಂತಾದ ಸಾಂಪ್ರದಾಯಿಕ ಮತ್ತು ಹೊಸ ಯುಗದ ಆರ್ಥಿಕತೆಗಳಲ್ಲಿ ಶ್ರಮ ಬಲದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು.
  14. ಶೈಕ್ಷಣಿಕ ಸಂಸ್ಥೆಗಳು, ನಾಗರಿಕ ಸಮಾಜ ಮತ್ತು ಇತರ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಧ್ಯಯನಗಳು, ವರದಿಗಳು, ಸಮೀಕ್ಷೆಗಳು ಇತ್ಯಾದಿಗಳನ್ನು ನಿಯೋಜಿಸುವುದು.
  15. ವರದಿಗಳು, ಪ್ರಕಟಣೆಗಳು ಇತ್ಯಾದಿ ದಾಖಲೆಗಳನ್ನು ಆಂತರಿಕ ಸರ್ಕಾರಿ ಗ್ರಂಥಾಲಯವಾಗಿ ನಿರ್ವಹಿಸುವುದು.
  16. ನೀತಿ ಆಯೋಗದೊಂದಿಗೆ ಸಮಸ್ತ ಸಂವಹನ ಮತ್ತು ಸಮನ್ವಯಕ್ಕಾಗಿ ಕರ್ನಾಟಕದ ನೋಡಲ್ ಏಜೆನ್ಸಿಯಾಗಿ ಸೇವೆ ಸಲ್ಲಿಸುವುದು.
  17. ಅಂತರ್-ಸಂಪರ್ಕೀಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಅಗತ್ಯವಾದ ಕಾರ್ಯತಂತ್ರದ ಅಂತರ್‌-ಇಲಾಖಾವಾರು ಸಮನ್ವಯಕ್ಕೆ ಕರೆನೀಡುವುದು ಮತ್ತು ಸುಗಮಗೊಳಿಸುವುದು.

        

ಉಪಾಧ್ಯಕ್ಷರ ಕಾರ್ಯಗಳು ಈ ಕೆಳಗಿನಂತಿವೆ:

 

  1. ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸಭೆಗಳ ಅಧ್ಯಕ್ಷತೆ ವಹಿಸುವುದು ಮತ್ತು ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಕಾರ್ಯತಂತ್ರದ ಸಲಹೆ ಮತ್ತು ಒಳಹರಿವು (Inputs) ಗಳನ್ನು ಒದಗಿಸುವುದು.
  2. ಇಲಾಖೆಗಳು, ಅಧಿಕಾರಿಗಳು, ಮಂಡಳಿಗಳು, ನಿಗಮಗಳು ಇತ್ಯಾದಿಗಳೊಂದಿಗೆ ಸಂವಹನ ನಡೆಸುವುದು ಮತ್ತು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ನಿರ್ಧಾರಗಳನ್ವಯ ಅಭಿವೃದ್ಧಿ ಕಾರ್ಯಸೂಚಿಯನ್ನು ಮುನ್ನಡೆಸಲು ನಿಯಮಿತ ಸಭೆಗಳನ್ನು ನಡೆಸುವುದು.
  3. ಮಹತ್ವಾಕಾಂಕ್ಷೆಯ ಜಿಲ್ಲೆ/ತಾಲೂಕು/ಗ್ರಾಮ ಪಂಚಾಯತಿ/ಗ್ರಾಮ ಸೇರಿದಂತೆ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದ ಪ್ರಕ್ರಿಯೆ ಮತ್ತು ನೀತಿಯನ್ನು ಒದಗಿಸುವುದು.
  4. ಕೇಂದ್ರೀಕೃತ ಮತ್ತು ವಿಕೇಂದ್ರೀಕೃತ ಆಯವ್ಯಯ ಯೋಜನೆಯಲ್ಲಿ ಭಾಗವಹಿಸುವುದು.
  5. ಸಂಬಂಧಪಟ್ಟ ಇಲಾಖೆಗಳ ಒಪ್ಪಿಗೆಯೊಂದಿಗೆ ಸುಸ್ಥಿರ ಅಭಿವೃದ್ಧಿ ಗುರಿಗಳ ಆಯವ್ಯಯ ಮತ್ತು ಹಣಕಾಸಿಗೆ ಚಾಲನೆ ನೀಡುವುದು.
  6. ನೀತಿ ಮೌಲ್ಯಮಾಪನ ಮತ್ತು ಸಲಹೆಗಾಗಿ ಅಂತರ ಮತ್ತು ಆಂತರಿಕ ಇಲಾಖಾ ಸಂವಹನಗಳಿಗೆ ಕರೆ ಮತ್ತು ಮಾರ್ಗದರ್ಶನ ನೀಡುವುದು.
  7. ಕರ್ನಾಟಕದ ಆರ್ಥಿಕ ಸಮೀಕ್ಷೆ ಮತ್ತು ಇತರೇ ವರದಿಗಳ ಯೋಜನೆ ಮತ್ತು ಪ್ರಕಟಣೆಯಲ್ಲಿ ಭಾಗವಹಿಸುವುದು.ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವನ್ನು ಪ್ರತಿನಿಧಿಸುವುದು, ವಿವಿಧ ವೇದಿಕೆಗಳು, ಪತ್ರಿಕಾ, ಪ್ರಕಟಣೆಗಳು ಇತ್ಯಾದಿಗಳ ಮೂಲಕ ಉಪಕ್ರಮಗಳ ಅರಿವು ಮೂಡಿಸುವುದು ಮತ್ತು ಮಧ್ಯಸ್ಥಗಾರರೊಂದಿಗೆ ಸಂಬಂಧಗಳನ್ನು ಕಲ್ಪಿಸುವುದು.

ಇತ್ತೀಚಿನ ನವೀಕರಣ​ : 16-03-2024 01:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ (KSPPC)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080